Search Results For:siman 2

Total Records Found:3

ಪ್ರಾರ್ಥನೆಯ ಶಿಷ್ಟಾಚಾರಗಳು

ವುದೂ ಇರುವ ಸ್ಥಿತಿಯಲ್ಲಿ ಪ್ರಾರ್ಥಿಸುವುದು. ನಮಾಝ್‌ಗಾಗಿ ವುದೂ ಮಾಡುವಂತೆ ವುದೂ ಮಾಡುವುದು. ಅಲ್-ಬುಖಾರಿ ಮತ್ತು ಮುಸ್ಲಿಮ್‌ನಲ್ಲಿರುವ ಅಬೂ ಮೂಸಾ(ರ) ರವರ ಹದೀಸ್ ನಲ್ಲಿರುವಂತೆ. ಅದರಲ್ಲಿ ಅವರ ಚಿಕ್ಕಪ್ಪ ಅಬೂ ಅಮಿರ್(ರ) ರ ಒಂದು ಘಟನೆಯ ಉಲ್ಲೇಖವಿದೆ. ಪ್ರವಾದಿ(ಸ) ರವರ ಬಳಿಗೆ ಹೋಗಿ ತಮಗಾಗಿ ಪ್ರಾರ್ಥಿಸಲು ಹೇಳಬೇಕೆಂದು ಅಬೂ ಆಮಿರ್(ರ) ಅಬೂ ಮೂಸಾ(ರ) ರನ್ನು ಪ್ರವಾದಿಯ(ಸ) ಬಳಿಗೆ ಕಳಿಸಿದರು. ಆಗ ಪ್ರವಾದಿ(ಸ) ರವರು ನೀರು ತರಲು ಆಜ್ಞಾಪಿಸಿದರು. ನಂತರ ಅದರಲ್ಲಿ ವುದೂ ನಿರ್ವಹಿಸಿದರು. ನಂತರ ಕೈಗಳನ್ನು ಮೇಲಕ್ಕೆತ್ತಿ ಪ್ರಾರ್ಥಿಸಿದರು: "ಓ ಅಲ್ಲಾಹನೇ. ಅಬೂ ಆಮಿರ್ ಉಬೈದ್‌ರನ್ನು ಕ್ಷಮಿಸು." ಅವರು ಎಷ್ಟರಮಟ್ಟಿಗೆ ಕೈಗಳನ್ನೆತ್ತಿದರು ಎಂದರೆ ಅವರ ಕಂಕುಳದ ಬಿಳುಪು ನನಗೆ ಕಾಣುತ್ತಿತ್ತು. ನಂತರ ಅವರು ಪ್ರಾರ್ಥಿಸಿದರು: "ಓ ಅಲ್ಲಾಹನೇ, ಪುನರುತ್ಥಾನದ ದಿನ ಅವರನ್ನು ನಿನ್ನ ಅನೇಕ...

Show more...

ಕುರ್‌ಆನಿನಲ್ಲಿರುವ ಪ್ರಾರ್ಥನೆಗಳು

"ನಮ್ಮ ರಬ್ಬೇ! ನಮ್ಮ ಮೇಲೆ ತಾಳ್ಮೆಯನ್ನು ಸುರಿಸು, ನಮ್ಮ ಪಾದಗಳನ್ನು ಅಚಲಗೊಳಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ನೆರವನ್ನು ನೀಡು." (ಕುರ್‌ಆನ್ 2:250)

Show more...

ಮಂತ್ರದ ಪ್ರಾರ್ಥನೆಗಳು

ಆಯತುಲ್ ಕುರ್ಸೀ ಒಂದು ಸಲ ಪಾರಾಯಣ ಮಾಡಬೇಕು.ಅಲ್ಲಾಹು. ಅವನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ಅವನು ನಿರಂತರ ಜೀವಿಸುವವನು. ಸ್ವಯಂ ಅಸ್ತಿತ್ವದಲ್ಲಿರುವವನು ಮತ್ತು ಇತರೆಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನು. ತೂಕಡಿಕೆಯೋ ನಿದ್ದೆಯೋ ಅವನನ್ನು ಹಿಡಿದುಕೊಳ್ಳುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವುದೆಲ್ಲವೂ ಅವನದ್ದು. ಅವನ ಅಪ್ಪಣೆಯಿಲ್ಲದೆ ಅವನ ಬಳಿ ಶಿಫಾರಸು ಮಾಡುವವರು ಯಾರು? ಅವರಿಗೆ ಈಗಾಗಲೇ ಸಂಭವಿಸಿರುವುದನ್ನು ಮತ್ತು ಮುಂದೆ ಸಂಭವಿಸಲಿರುವುದನ್ನು ಅವನು ಅರಿಯುತ್ತಾನೆ. ಅವನು ಇಚ್ಛಿಸಿದ್ದನ್ನು ಹೊರತು ಅವನ ಜ್ಞಾನದಿಂದ ಏನನ್ನೂ ಸೂಕ್ಷ್ಮವಾಗಿ ಅರಿಯಲು ಅವರಿಗೆ ಸಾಧ್ಯವಿಲ್ಲ. ಅವನ ಕುರ್ಸೀ ಭೂಮ್ಯಾಕಾಶಗಳನ್ನು ಆವರಿಸಿಕೊಂಡಿದೆ. ಅವುಗಳನ್ನು ಸಂರಕ್ಷಿಸುವುದು ಅವನಿಗೆ ಭಾರವಿರುವ ಸಂಗತಿಯೇ ಅಲ್ಲ. ಅವನು ಅತ್ಯುನ್ನತನೂ ಮಹಾನನೂ ಆಗಿದ್ದಾನೆ.

Show more...