«اللهُمَّ إِنِّي أَعُوذُ بِكَ مِنَ الْعَجْزِ، وَالْكَسَلِ، وَالْجُبْنِ، وَالْبُخْلِ، وَالْهَرَمِ، وَعَذَابِ الْقَبْرِ اللهُمَّ آتِ نَفْسِي تَقْوَاهَا، وَزَكِّهَا أَنْتَ خَيْرُ مَنْ زَكَّاهَا، أَنْتَ وَلِيُّهَا وَمَوْلَاهَا، اللهُمَّ إِنِّي أَعُوذُ بِكَ مِنْ عِلْمٍ لَا يَنْفَعُ، وَمِنْ قَلْبٍ لَا يَخْشَعُ، وَمِنْ نَفْسٍ لَا تَشْبَعُ، وَمِنْ دَعْوَةٍ لَا يُسْتَجَابُ لَهَا»
ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಅಜ್‌ಝಿ ವಲ್ ಕಸಲಿ ವಲ್ ಜುಬ್ನಿ ವಲ್ ಬುಖ್ಲಿ ವಲ್ ಹರಮಿ ವಅದಾಬಿಲ್ ಕಬ್ರ್, ಅಲ್ಲಾಹುಮ್ಮ ಆತಿ ನಫ್ಸೀ ತಕ್ವಾಹಾ ವಝಕ್ಕಿಹಾ ಅನ್ತ ಖೈರು ಮನ್ ಝಕ್ಕಾಹಾ ಅನ್ತ ವಲಿಯ್ಯುಹಾ ವಮೌಲಾಹಾ, ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನ್ ಇಲ್ಮಿನ್ ಲಾ ಯನ್ಫಉ ವಮಿನ್ ಕಲ್ಬಿನ್ ಲಾ ಯಖ್‌ಶಉ ವಮಿನ್ ನಫ್ಸಿನ್ ಲಾ ತಶ್ಬಉ ವಮಿನ್ ದಅವತಿನ್ ಲಾ ಯುಸ್ತಜಾಬು ಲಹಾ
“ಓ ಅಲ್ಲಾಹ್! ದೌರ್ಬಲ್ಯ, ಸೋಮಾರಿತನ, ಹೇಡಿತನ, ಜಿಪುಣತೆ, ವೃದ್ಧಾಪ್ಯ ಮತ್ತು ಗೋರಿ ಶಿಕ್ಷೆಯಿಂದ ನಿನ್ನೊಂದಿಗೆ ಅಭಯ ಬೇಡುತ್ತಿದ್ದೇನೆ. ಓ ಅಲ್ಲಾಹ್! ನನ್ನ ದೇಹಕ್ಕೆ ಭಯಭಕ್ತಿಯನ್ನು ನೀಡು, ಅದನ್ನು ಶುದ್ಧೀಕರಿಸು, ಅದನ್ನು ಶುದ್ಧೀಕರಿಸಲು ನೀನೇ ಉತ್ತಮನಾಗಿರುವೆ. ನೀನು ಅದರ ಒಡೆಯನೂ, ರಕ್ಷಕನೂ ಆಗಿರುವೆ. ಓ ಅಲ್ಲಾಹ್! ಉಪಯೋಗವಿಲ್ಲದ ವಿದ್ಯೆ, ಭಕ್ತಿಯಿಲ್ಲದ ಹೃದಯ, ಸಂತೃಪ್ತವಾಗದ ಆತ್ಮ ಮತ್ತು ಉತ್ತರಿಸಲ್ಪಡದ ಪ್ರಾರ್ಥನೆಯಿಂದ ನಿನ್ನೊಂದಿಗೆ ಅಭಯ ಬೇಡುತ್ತಿದ್ದೇನೆ.”