7

«اللَّهُمَّ إِنِّي عَبْدُكَ ابْنُ عَبْدِكَ ابْنُ أَمَتِكَ نَاصِيَتِي بِيَدِكَ مَاضٍ فِيَّ حُكْمُكَ عَدْلٌ فِيَّ قَضَاؤُكَ، أَسْأَلُكَ بِكُلِّ اسْمٍ هُوَ لَكَ سَمَّيْتَ بِهِ نَفْسَكَ أَوْ أَنْزَلْتَهُ فِي كِتَابِكَ أَوْ عَلَّمْتَهُ أَحَدًا مِنْ خَلْقِكَ أَوِ اسْتَأْثَرْتَ بِهِ فِي عِلْمِ الْغَيْبِ عِنْدَكَ أَنْ تَجْعَلَ الْقُرْآنَ رَبِيعَ قَلْبِي وَنُورَ صَدْري وَجِلَاءَ حُزْنِي وَذَهَابَ هَمِّي»
{وهو دعاء الهم والحزن}

ಅಲ್ಲಾಹುಮ್ಮ ಇನ್ನೀ ಅಬ್ದುಕ, ವಬ್ನು ಅಬ್ದಿಕ, ವಬ್ನು ಅಮತಿಕ, ನಾಸಿಯತೀ ಬಿಯದಿಕ, ಮಾದಿನ್ ಫಿಯ್ಯ ಹುಕ್ಮುಕ, ಅದ್ಲುನ್ ಫಿಯ್ಯ ಕದಾಉಕ, ಅಸ್ಅಲುಕ ಬಿಕುಲ್ಲಿ ಇಸ್ಮಿನ್ ಹುವ ಲಕ, ಸಮ್ಮಯ್ತ ಬಿಹೀ ನಫ್ಸಕ, ಅವ್ ಅನ್ಝಲ್ತಹೂ ಫೀ ಕಿತಾಬಿಕ, ಅವ್ ಅಲ್ಲಮ್ತಹೂ ಅಹದನ್ ಮಿನ್ ಖಲ್ಕಿಕ, ಅವಿಸ್ತಅ್‌ಸರ್ತ ಬಿಹೀ ಫೀ ಇಲ್ಮಿಲ್ ಗೈಬಿ ಇನ್ದಕ, ಅನ್ ತಜ್ಅಲಲ್ ಕುರ್‌ಆನ ರಬೀಅ ಕಲ್ಬೀ, ವನೂರ ಸದ್ರೀ, ವಜಲಾಅ ಹುಝ್‍ನೀ, ವದಹಾಬ ಹಮ್ಮೀ

 “ಓ ಅಲ್ಲಾಹ್! ನಾನು ನಿನ್ನ ದಾಸ. ನಿನ್ನ ದಾಸನ ಮಗ. ನಿನ್ನ ದಾಸಿಯ ಮಗ. ನನ್ನ ಮುಂದಲೆ ನಿನ್ನ ಕೈಯಲ್ಲಿದೆ. ನಿನ್ನ ವಿಧಿ ನನ್ನಲ್ಲಿ ಜಾರಿಯಾಗಿದೆ. ನನ್ನ ಬಗ್ಗೆ ನಿನ್ನ ತೀರ್ಮಾನವು ನ್ಯಾಯಪೂರ್ಣವಾಗಿದೆ. ನೀನು ನಿನ್ನನ್ನು ಹೆಸರಿಸಿದ, ಅಥವಾ ನಿನ್ನ ಗ್ರಂಥದಲ್ಲಿ ಅವತೀರ್ಣಗೊಳಿಸಿದ, ಅಥವಾ ನಿನ್ನ ಸೃಷ್ಟಿಗಳಲ್ಲಿ ಯಾರಿಗಾದರೂ ನೀನು ಕಲಿಸಿಕೊಟ್ಟ, ಅಥವಾ ನಿನ್ನ ಬಳಿ ಅದೃಶ್ಯಜ್ಞಾನದಲ್ಲಿ ಸಂರಕ್ಷಿಸಿಟ್ಟ ನಿನ್ನ ಎಲ್ಲ ಹೆಸರುಗಳ ಮೂಲಕ, ಕುರ್‌ಆನನ್ನು ನನ್ನ ಹೃದಯದ ವಸಂತವನ್ನಾಗಿ, ನನ್ನ ಎದೆಯ ಬೆಳಕನ್ನಾಗಿ, ನನ್ನ ದುಃಖದ ನಿವಾರಕವನ್ನಾಗಿ ಮತ್ತು ನನ್ನ ವ್ಯಥೆಯ ನಿವಾರಕವನ್ನಾಗಿ ಮಾಡಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ.”

ಇದು ಕಷ್ಟ ಮತ್ತು ದುಃಖವನ್ನು ನಿವಾರಿಸುವುದಕ್ಕಿರುವ ಪ್ರಾರ್ಥನೆ

7/19