«اللهُمَّ إِنِّي أَسْأَلُكَ مِنَ الْخَيْرِ كُلِّهِ عَاجِلِهِ وَآجِلِهِ، مَا عَلِمْتُ مِنْهُ وَمَا لَمْ أَعْلَمْ، وَأَعُوذُ بِكَ مِنَ الشَّرِّ كُلِّهِ، عَاجِلِهِ وَآَجِلِهِ مَا عَلِمْتُ مِنْهُ، وَمَا لَمْ أَعْلَمْ، اللهُمَّ إِنِّي أَسْأَلُكَ مِنْ خَيْرِ مَا سَأَلَكَ عَبْدُكَ وَنَبِيُّكَ مُحَمَّدٌ (صلی الله علیه وسلم)، وَأَعُوذُ بِكَ مِنْ شَرِّ مَا عَاذَ مِنْهُ عَبْدُكَ وَنَبِيُّكَ، اللهُمَّ إِنِّي أَسْأَلُكَ الْجَنَّةَ وَمَا قَرَّبَ إِلَيْهَا مِنْ قَوْلٍ أَوْ عَمَلٍ، وَأَعُوذُ بِكَ مِنَ النَّارِ وَمَا قَرَّبَ إِلَيْهَا مِنْ قَوْلٍ أَوْ عَمَلٍ، وَأَسْأَلُكَ أَنْ تَجْعَلَ كُلَّ قَضَاءٍ تَقْضِيهِ لِي خَيْرًا»
{وهو من جوامع الدعاء وكوامله}
(ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನಲ್ ಖೈರಿ ಕುಲ್ಲಿಹೀ, ಆಜಿಲಿಹೀ ವಆಜಿಲಿಹೀ, ಮಾ ಅಲಿಮ್ತು ಮಿನ್‌ಹು ವಮಾ ಲಮ್ ಅಅಲಮ್, ವಅಊದು ಬಿಕ ಮಿನ ಶ್ಶರ್‍ರಿ ಕುಲ್ಲಿಹೀ, ಆಜಿಲಿಹೀ ವಆಜಿಲಿಹೀ, ಮಾ ಅಲಿಮ್ತು ಮಿನ್‌ಹು ವಮಾ ಲಮ್ ಅಅಲಮ್, ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಖೈರಿ ಮಾ ಸಅಲಕ ಅಬ್ದುಕ ವನಬಿಯ್ಯುಕ ಮುಹಮ್ಮದುನ್ ಸಲ್ಲಲ್ಲಾಹು ಅಲೈಹಿ ವಸಲ್ಲಮ, ವಅಊದು ಬಿಕ ಮಿನ್ ಶರ‍್ರಿ ಮಾ ಆದ ಮಿನ್‌ಹು ಅಬ್ದುಕ ನಬಿಯ್ಯುಕ. ಅಲ್ಲಾಹುಮ್ಮ ಇನ್ನೀ ಅಸ್‌ಅಲುಕಲ್ ಜನ್ನತ ವಮಾ ಕರ‍್ರಬ ಇಲೈಹಾ ಮಿನ್ ಕೌಲಿನ್ ಅವ್ ಅಮಲಿನ್, ವಅಊದು ಬಿಕ ಮಿನ ನ್ನಾರಿ ವಮಾ ಕರ‍್ರಬ ಇಲೈಹಾ ಮಿನ್ ಕೌಲಿನ್ ಅವ್ ಅಮಲಿನ್, ವ ವಅಸ್‌ಅಲುಕ ಅನ್ ತಜ್‌ಅಲ ಕುಲ್ಲ ಕದಾಇನ್ ಕದಯ್ತಹೂ ಲೀ ಖೈರನ್)
“ಓ ಅಲ್ಲಾಹ್! ಐಹಿಕವಾದ ಮತ್ತು ಪಾರಲೌಕಿಕವಾದ ಒಳಿತುಗಳೆಲ್ಲವನ್ನೂ ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ, ಅವುಗಳಲ್ಲಿ ನಾನು ತಿಳಿದಿರುವುದನ್ನೂ ತಿಳಿಯದಿರುವುದನ್ನೂ (ಬೇಡುತ್ತಿದ್ದೇನೆ). ಐಹಿಕವಾದ ಮತ್ತು ಪಾರಲೌಕಿಕವಾದ ಕೆಡುಕುಗಳೆಲ್ಲದರಿಂದಲೂ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿದ್ದೇನೆ, ಅವುಗಳಲ್ಲಿ ನಾನು ತಿಳಿದಿರುವುದರಿಂದಲೂ ತಿಳಿಯದಿರುವುದರಿಂದಲೂ (ಅಭಯ ಯಾಚಿಸುತ್ತಿದ್ದೇನೆ). ಓ ಅಲ್ಲಾಹ್! ನಿನ್ನ ದಾಸ ಮತ್ತು ಪ್ರವಾದಿಯಾದ ಮುಹಮ್ಮದ್(ಸ) ರವರು ನಿನ್ನೊಂದಿಗೆ ಬೇಡಿದ ಒಳಿತುಗಳೆಲ್ಲವನ್ನೂ ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ, ನಿನ್ನ ದಾಸ ಮತ್ತು ಪ್ರವಾದಿಯಾದ ಮುಹಮ್ಮದ್(ಸ) ರವರು ನಿನ್ನೊಂದಿಗೆ ಅಭಯ ಯಾಚಿಸಿದ ಕೆಡುಕುಗಳೆಲ್ಲದರಿಂದಲೂ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿದ್ದೇನೆ. ಓ ಅಲ್ಲಾಹ್! ಸ್ವರ್ಗವನ್ನು ಮತ್ತು ಅದಕ್ಕೆ ಹತ್ತಿರದಲ್ಲಿರುವ ಮಾತು ಮತ್ತು ಕರ್ಮವನ್ನು ನಾನು ನಿನ್ನೊಂದಿಗೆ ಬೇಡುತ್ತಿದ್ದೇನೆ, ನರಕ ಮತ್ತು ಅದಕ್ಕೆ ಹತ್ತಿರದಲ್ಲಿರುವ ಮಾತು ಮತ್ತು ಕರ್ಮದಿಂದ ನಾನು ನಿನ್ನೊಂದಿಗೆ ಅಭಯ ಯಾಚಿಸುತ್ತಿದ್ದೇನೆ. ನೀನು ನನ್ನ ಮೇಲೆ ವಿಧಿಸಿದ ಎಲ್ಲಾ ವಿಧಿಗಳೂ ನನಗೆ ಒಳಿತಾಗಿ ಮಾಡಬೇಕೆಂದು ಬೇಡುತ್ತೇನೆ.”
ಇದು ಸಮಗ್ರವಾದ ಒಂದು ಪ್ರಾರ್ಥನೆ