18

«اللَّهُمَّ بِعِلْمِكَ الْغَيْبَ، وَقُدْرَتِكَ عَلَى الْخَلْقِ، أَحْيِنِي مَا عَلِمْتَ الْحَيَاةَ خَيْرًا لِي، وَتَوَفَّنِي إِذَا عَلِمْتَ الْوَفَاةَ خَيْرًا لِي، وَأَسْأَلُكَ خَشْيَتَكَ فِي الْغَيْبِ وَالشَّهَادَةِ، وَكَلِمَةَ الْإِخْلَاصِ فِي الرِّضَا وَالْغَضَبِ، وَأَسْأَلُكَ نَعِيمًا لَا يَنْفَدُ، وَقُرَّةَ عَيْنٍ لَا تَنْقَطِعُ، وَأَسْأَلُكَ الرِّضَاءَ بِالْقَضَاءِ، وَبَرْدَ الْعَيْشِ بَعْدَ الْمَوْتِ، وَلَذَّةَ النَّظَرِ إِلَى وَجْهِكَ، وَالشَّوْقَ إِلَى لِقَائِكَ، وَأَعُوذُ بِكَ مِنْ ضَرَّاءَ مُضِرَّةٍ، وَفِتْنَةٍ مُضِلَّةٍ، اللَّهُمَّ زَيِّنَّا بِزِينَةِ الْإِيمَانِ، وَاجْعَلْنَا هُدَاةً مُهْتَدِينَ»

ಅಲ್ಲಾಹುಮ್ಮ ಬಿಇಲ್ಮಿಕಲ್ ಗೈಬ ವಕುದ್ರತಿಕ ಅಲಲ್ ಖಲ್ಕಿ ಅಹ್ಯಿನೀ ಮಾ ಅಲಿಮ್ತಲ್ ಹಯಾತ ಖೈರನ್ ಲೀ ವತವಫ್ಫನೀ ಇದಾ ಅಲಿಮ್ತಲ್ ವಫಾತ ಖೈರನ್ ಲೀ, ವಅಸ್ಅಲುಕ ಖಶ್ಯತಕ ಫಿಲ್ ಗೈಬಿ ವಶ್ಶಹಾದತಿ, ವಕಲಿಮತಲ್ ಇಖ್ಲಾಸಿ ಫಿರ್ರಿದಾ ವಲ್ ಗದಬಿ, ವಅಸ್ಅಲುಕ ನಈಮನ್ ಲಾ ಯನ್‍ಫದು, ವಕುರ್ರತ ಐನಿನ್ ಲಾ ತನ್ಕತಿಉ, ವಅಸ್ಅಲುಕ ರ್ರಿದಾಅ ಬಿಲ್ ಕದಾಇ, ವಬರದಲ್ ಐಶಿ ಬಅ್‌ದಲ್ ಮೌತಿ, ವಲದ್ದತ ನ್ನಝರಿ ಇಲಾ ವಜ್‍ಹಿಕ ವಶ್ಶೌಕ ಇಲಾ ಲಿಕಾಇಕ ವಅಊದು ಬಿಕ ಮಿನ್ ದರ್ರಾಅ ಮುದಿರ್ರತಿನ್ ವಫಿತ್ನತಿನ್ ಮುದಿಲ್ಲತಿನ್, ಅಲ್ಲಾಹುಮ್ಮ ಝಯ್ಯಿನ್ನಾ ಬಿಝೀನತಿಲ್ ಈಮಾನಿ ವಜ್ಅಲ್‍ನಾ ಹುದಾತನ್ ಮುಹ್ತದೀನ್

 “ಓ ಅಲ್ಲಾಹ್! ನಿನ್ನ ಅದೃಶ್ಯಜ್ಞಾನ ಮತ್ತು ಸೃಷ್ಟಿಗಳ ಮೇಲೆ ನಿನಗಿರುವ ಸಾಮರ್ಥ್ಯದ ಆಧಾರದಲ್ಲಿ ಈ ಜೀವನವು ನನಗೆ ಒಳಿತಾಗಿರುವ ತನಕ ನನ್ನನ್ನು ಬದುಕಿಸು. ಮರಣವು ನನಗೆ ಒಳಿತಾಗಿದ್ದರೆ ನನ್ನನ್ನು ಮೃತಪಡಿಸು. ಓ ಅಲ್ಲಾಹ್! ದೃಶ್ಯ ಸ್ಥಿತಿಯಲ್ಲೂ ಅದೃಶ್ಯ ಸ್ಥಿತಿಯಲ್ಲೂ ನಿನ್ನನ್ನು ಭಯಪಟ್ಟು ಜೀವಿಸುವಂತೆ ನನ್ನನ್ನು ಮಾಡಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ. ಸಂತೋಷದಲ್ಲಿರುವಾಗಲೂ, ಕೋಪದಲ್ಲಿರುವಾಗಲೂ ನಿಷ್ಕಳಂಕ ಮಾತನ್ನೇ ನುಡಿಯುವಂತೆ ಮಾಡಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ. ಎಂದೂ ಮುಗಿಯದ ವರಗಳನ್ನು ಮತ್ತು ಎಂದೂ ಮುರಿಯದ ಕಣ್ತಂಪನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ವಿಧಿಗೆ ತೃಪ್ತಿ ಸೂಚಿಸುವಂತೆ ಮಾಡಬೇಕೆಂದು ನಾನು ನಿನ್ನಲ್ಲಿ ಬೇಡುತ್ತೇನೆ. ಮರಣಾನಂತರ ಸುಖವಾದ ಜೀವನವನ್ನು ಕರುಣಿಸುವಂತೆ ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ಮುಖದೆಡೆಗೆ ನೋಡುವ ಮಧುರ ನೋಟವನ್ನು, ಹಾನಿಕರವಾದ ದುರಂತವೋ, ಪಥಭ್ರಷ್ಟಗೊಳಿಸುವ ಪರೀಕ್ಷೆಯೋ ಇಲ್ಲದೆ ನಿನ್ನನ್ನು ಭೇಟಿ ಮಾಡುವ ಆಸೆಯನ್ನು ನಾನು ನಿನ್ನಲ್ಲಿ ಬೇಡುತ್ತೇನೆ. ಓ ಅಲ್ಲಾಹ್! ಈಮಾನಿನ ಸೌಂದರ್ಯದಿಂದ ನಮ್ಮನ್ನು ಅಲಂಕರಿಸು. ಮಾರ್ಗದರ್ಶನ ನೀಡುವ ಮತ್ತು ಮಾರ್ಗದರ್ಶನ ಪಡೆದವರನ್ನಾಗಿ ನಮ್ಮನ್ನು ಮಾಡು.”

18/19