15

«اللَّهُمَّ إِنِّي أَسْأَلُكَ فِعْلَ الخَيْرَاتِ، وَتَرْكَ الْمُنْكَرَاتِ، وَحُبَّ الْمَسَاكِينِ، وَأَنْ تَغْفِرَ لِي وَتَرْحَمَنِي، وَإِذَا أَرَدْتَ فِتْنَةً فِي قَوْمٍ فَتَوَفَّنِي غَيْرَ مَفْتُونٍ، وَأَسْأَلُكَ حُبَّكَ وَحُبَّ مَنْ يُحِبُّكَ، وَحُبَّ عَمَلٍ يُقَرِّبُ إِلَى حُبِّكَ»
{قال صلى الله عليه وسلم عن هذه الدعوات: إِنَّهَا حَقٌّ فَادْرُسُوهَا ثُمَّ تَعَلَّمُوهَا}

ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಫಿಅ್‌ಲಲ್ ಖೈರಾತಿ, ವತರ್ಕಲ್ ಮುನ್ಕರಾತಿ, ವಹುಬ್ಬಲ್ ಮಸಾಕೀನಿ, ವಅನ್ ತಗ್ಫಿರ ಲೀ ವತರ್ಹಮನೀ, ವಇದಾ ಅರದ್ತ ಫಿತ್ನತನ್ ಫೀ ಕೌಮಿನ್ ಫತವಫ್ಫನೀ ಗೈರ ಮಫ್ತೂನಿನ್. ವಅಸ್‌ಅಲುಕ ಹುಬ್ಬಕ ವ ಹುಬ್ಬ ಮನ್ ಯುಹಿಬ್ಬುಕ, ವಹುಬ್ಬ ಅಮಲಿನ್ ಯುಕರ್‍ರಿಬು ಇಲಾ ಹುಬ್ಬಿಕ

“ಓ ಅಲ್ಲಾಹ್! ನಾನು ನಿನ್ನಲ್ಲಿ ಸತ್ಕರ್ಮಗಳನ್ನು, ದುಷ್ಕರ್ಮಗಳ ತೊರೆಯುವಿಕೆಯನ್ನು, ಬಡವರ ಪ್ರೀತಿಯನ್ನು ಬೇಡುತ್ತೇನೆ. ನೀನು ನನ್ನನ್ನು ಕ್ಷಮಿಸಬೇಕೆಂದು ಮತ್ತು ನನಗೆ ಕರುಣೆ ತೋರಬೇಕೆಂದು ಬೇಡುತ್ತೇನೆ. ನೀನು ಯಾವುದಾದರೂ ಜನತೆಯನ್ನು ಪರೀಕ್ಷಿಸಲು ಬಯಸಿದರೆ ಪರೀಕ್ಷೆಗೆ ಒಳಗಾಗದಂತೆ ನನ್ನನ್ನು ಮೃತಪಡಿಸಬೇಕೆಂದು ಬೇಡುತ್ತೇನೆ. ನಾನು ನಿನ್ನ ಪ್ರೀತಿಯನ್ನು, ನಿನ್ನನ್ನು ಪ್ರೀತಿಸುವವರ ಪ್ರೀತಿಯನ್ನು, ನಿನ್ನ ಪ್ರೀತಿಗೆ ಸಮೀಪಗೊಳಿಸುವ ಕರ್ಮದ ಪ್ರೀತಿಯನ್ನು ಬೇಡುತ್ತೇನೆ.”

ಈ ಪ್ರಾರ್ಥನೆಗಳ ಬಗ್ಗೆ ಪ್ರವಾದಿ(ಸ) ರವರು ಹೇಳಿದರು: ಇವೆಲ್ಲವೂ ಸತ್ಯ. ಇವುಗಳನ್ನು ಕಲಿಯಿರಿ ನಂತರ ಇತರರಿಗೆ ಕಲಿಸಿರಿ.

15/19