«وَجَّهْتُ وَجْهِيَ لِلَّذِي فَطَرَ السَّمَاوَاتِ وَالْأَرْضَ حَنِيفًا، وَمَا أَنَا مِنَ الْمُشْرِكِينَ، إِنَّ صَلَاتِي، وَنُسُكِي، وَمَحْيَايَ، وَمَمَاتِي لِلَّهِ رَبِّ الْعَالَمِينَ، لَا شَرِيكَ لَهُ، وَبِذَلِكَ أُمِرْتُ وَأَنَا مِنَ الْمُسْلِمِينَ، اللهُمَّ أَنْتَ الْمَلِكُ لَا إِلَهَ إِلَّا أَنْتَ، أَنْتَ رَبِّي، وَأَنَا عَبْدُكَ، ظَلَمْتُ نَفْسِي، وَاعْتَرَفْتُ بِذَنْبِي، فَاغْفِرْ لِي ذُنُوبِي جَمِيعًا، إِنَّهُ لَا يَغْفِرُ الذُّنُوبَ إِلَّا أَنْتَ، وَاهْدِنِي لِأَحْسَنِ الْأَخْلَاقِ لَا يَهْدِي لِأَحْسَنِهَا إِلَّا أَنْتَ، وَاصْرِفْ عَنِّي سَيِّئَهَا لَا يَصْرِفُ عَنِّي سَيِّئَهَا إِلَّا أَنْتَ، لَبَّيْكَ وَسَعْدَيْكَ وَالْخَيْرُ كُلُّهُ فِي يَدَيْكَ، وَالشَّرُّ لَيْسَ إِلَيْكَ، أَنَا بِكَ وَإِلَيْكَ، تَبَارَكْتَ وَتَعَالَيْتَ، أَسْتَغْفِرُكَ وَأَتُوبُ إِلَيْكَ»
{وهو من أدعية استفتاح الصلاة، خاصة في صلاة قيام الليل}
ವಜ್ಜಹ್ತು ವಜ್‍ಹಿಯ ಲಿಲ್ಲದೀ ಫತರ ಸ್ಸಮಾವಾತಿ ವಲ್ ಅರ್‍ದ ಹನೀಫನ್ ವಮಾ ಅನ ಮಿನಲ್ ಮುಶ್ರಿಕೀನ್. ಇನ್ನ ಸಲಾತೀ ವನುಸುಕೀ ವಮಹ್ಯಾಯ ವಮಮಾತೀ ಲಿಲ್ಲಾಹಿ ರಬ್ಬಿಲ್ ಆಲಮೀನ್. ಲಾ ಶರೀಕ ಲಹೂ ವಬಿದಾಲಿಕ ಉಮಿರ್ತು ವಅನ ಮಿನಲ್ ಮುಸ್ಲಿಮೀನ್. ಅಲ್ಲಾಹುಮ್ಮ ಅನ್ತಲ್ ಮಲಿಕು ಲಾ ಇಲಾಹ ಇಲ್ಲಾ ಅನ್ತ, ಅನ್ತ ರಬ್ಬೀ ವಅನ ಅಬ್ದುಕ ಝಲಮ್ತು ನಫ್ಸೀ ವಅ್‌ತರಫ್ತು ಬಿದಮ್ಬೀ ಫಗ್‍ಫಿರ್ ಲೀ ದುನೂಬೀ ಜಮೀಅನ್, ಇನ್ನಹೂ ಲಾ ಯಗ್‍ಫಿರು ದ್ದುನೂಬ ಇಲ್ಲಾ ಅನ್ತ, ವಹ್ದಿನೀ ಲಿಅಹ್ಸನಿಲ್ ಅಖ್‍ಲಾಕಿ, ಲಾ ಯಹ್ದೀ ಲಿಅಹ್ಸನಿಹಾ ಇಲ್ಲಾ ಅನ್ತ, ವಸ್ರಿಫ್ ಅನ್ನೀ ಸಯ್ಯಿಅಹಾ, ಲಾ ಯಸ್ರಿಫು ಅನ್ನೀ ಸಯ್ಯಿಅಹಾ ಇಲ್ಲಾ ಅನ್ತ, ಲಬ್ಬಯ್ಕ, ವಸಅ್‌ದಯ್ಕ ವಲ್ ಖೈರು ಕುಲ್ಲುಹೂ ಬಿಯದೈಕ, ವಶ್ಶರ್ರು ಲೈಸ ಇಲೈಕ, ಅನ ಬಿಕ ವಇಲೈಕ, ತಬಾರಕ್ತ ವತಆಲೈತ, ಅಸ್ತಗ್‍ಫಿರುಕ ವಅತೂಬು ಇಲೈಕ್
“ಭೂಮ್ಯಾಕಾಶಗಳನ್ನು ಸೃಷ್ಟಿಸಿದವನ ಕಡೆಗೆ ನಾನು ನನ್ನ ಮುಖವನ್ನು ನಿಷ್ಕಳಂಕವಾಗಿ ತಿರುಗಿಸಿದ್ದೇನೆ. ನಾನು ಬಹುದೇವ ವಿಶ್ವಾಸಿಗಳಲ್ಲಿ ಸೇರಿದವನಲ್ಲ. ನನ್ನ ನಮಾಝ್, ಬಲಿಕರ್ಮ, ಜೀವನ ಮತ್ತು ಮರಣ ಸರ್ವಲೋಕಗಳ ರಬ್ಬಾಗಿರುವ ಅಲ್ಲಾಹನಿಗೆ ಮೀಸಲು. ಅವನಿಗೆ ಯಾವುದೇ ಸಹಭಾಗಿಗಳಿಲ್ಲ. ಇದನ್ನೇ ನನಗೆ ಆದೇಶಿಸಲಾಗಿದೆ. ನಾನು ಮುಸ್ಲಿಮರಲ್ಲಿ ಸೇರಿದವನು. ಓ ಅಲ್ಲಾಹ್! ನೀನು ಅಧಿಪತಿಯಾಗಿರುವೆ. ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ನೀನು ನನ್ನ ರಬ್ಬ್ ಮತ್ತು ನಾನು ನಿನ್ನ ದಾಸ. ನಾನು ನನ್ನ ಮೇಲೆಯೇ ಅನ್ಯಾಯವೆಸಗಿದ್ದೇನೆ. ನನ್ನ ಪಾಪಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದುದರಿಂದ ನನ್ನ ಎಲ್ಲ ಪಾಪಗಳನ್ನೂ ಕ್ಷಮಿಸು. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ. ಅತ್ಯುತ್ತಮ ಗುಣ ನಡತೆಯ ಕಡೆಗೆ ನನ್ನನ್ನು ಮುನ್ನಡೆಸು. ಅತ್ಯುತ್ತಮ ಗುಣ ನಡತೆಯ ಕಡೆಗೆ ನೀನಲ್ಲದೆ ಮುನ್ನಡೆಸುವವರಿಲ್ಲ. ಕೆಟ್ಟ ಗುಣ ನಡತೆಯನ್ನು ನನ್ನಿಂದ ತೊಲಗಿಸು. ಕೆಟ್ಟ ಗುಣ ನಡತೆಯನ್ನು ನೀನಲ್ಲದೆ ತೊಲಗಿಸುವವರಿಲ್ಲ. ನಿನ್ನ ಕರೆಗೆ ಸ್ಪಂದಿಸಿ ಸಂತೋಷದಿಂದ ನಿನ್ನ ಸೇವೆ ಮಾಡಲು ನಾನು ಇಲ್ಲಿದ್ದೇನೆ. ಒಳಿತುಗಳೆಲ್ಲವೂ ನಿನ್ನ ಕೈಯಲ್ಲಿದೆ. ಕೆಡುಕು ನಿನ್ನಿಂದ ಉದ್ಭವಿಸುವುದಿಲ್ಲ. ನಿನ್ನ ಆಶ್ರಯವಲ್ಲದೆ ನನಗೆ ಬೇರೆ ಆಶ್ರಯವಿಲ್ಲ. ನೀನು ಅನುಗ್ರಹಪೂರ್ಣನು ಮತ್ತು ಅತ್ಯುನ್ನತನು. ನಾನು ನಿನ್ನಲ್ಲಿ ಕ್ಷಮೆಯಾಚಿಸುತ್ತಾ ನಿನ್ನ ಕಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೇನೆ.”
ಇದು ನಮಾಝ್ ಪ್ರಾರಂಭಿಸುವಾಗ -ವಿಶೇಷವಾಗಿ ರಾತ್ರಿ ನಮಾಝ್- ಹೇಳುವ ಪ್ರಾರ್ಥನೆ