«اللهُمَّ رَبَّ جَبْرَائِيلَ، وَمِيكَائِيلَ، وَإِسْرَافِيلَ، فَاطِرَ السَّمَاوَاتِ وَالْأَرْضِ، عَالِمَ الْغَيْبِ وَالشَّهَادَةِ، أَنْتَ تَحْكُمُ بَيْنَ عِبَادِكَ فِيمَا كَانُوا فِيهِ يَخْتَلِفُونَ، اهْدِنِي لِمَا اخْتُلِفَ فِيهِ مِنَ الْحَقِّ بِإِذْنِكَ، إِنَّكَ تَهْدِي مَنْ تَشَاءُ إِلَى صِرَاطٍ مُسْتَقِيمٍ»
{وهو من أدعية استفتاح الصلاة، خاصة في صلاة قيام الليل}
{ويقال عند التباس الحق وورود الشبهة على القلب}
ಅಲ್ಲಾಹುಮ್ಮ ರಬ್ಬ ಜಬ್ರಾಈಲ ವಮೀಕಾಈಲ ವಇಸ್ರಾಫೀಲ್! ಫಾತಿರ ಸ್ಸಮಾವಾತಿ ವಲ್‌ಅರ್ದ್! ಆಲಿಮಲ್ ಗೈಬಿ ವಶ್ಶಹಾದ! ಅನ್ತ ತಹ್ಕುಮು ಬೈನ ಇಬಾದಿಕ ಫೀಮಾ ಕಾನೂ ಫೀಹಿ ಯಖ್ತಲಿಫೂನ್. ಇಹ್ದಿನೀ ಲಿಮಖ್ತಲಫ ಫೀಹಿ ಮಿನಲ್ ಹಕ್ಕಿ ಬಿಇದ್ನಿಕ. ಇನ್ನತ ತಹ್ದೀ ಮನ್ ತಶಾಉ ಇಲಾ ಸಿರಾತಿನ್ ಮುಸ್ತಕೀಮ್.
“ಓ ಅಲ್ಲಾಹ್! ಜಿಬ್ರಾಈಲ್, ಮೀಕಾಈಲ್ ಮತ್ತು ಇಸ್ರಾಫೀಲ್‌ರ ರಬ್ಬೇ! ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನೇ! ಅಗೋಚರವಾಗಿರುವುದನ್ನು ಮತ್ತು ಗೋಚರವಾಗಿರುವುದನ್ನು ಅರಿತವನೇ! ನಿನ್ನ ದಾಸರು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿರುವರೋ ಆ ವಿಷಯದಲ್ಲಿ ನೀನು ಅವರ ನಡುವೆ ತೀರ್ಪು ನೀಡುವವನಾಗಿರುವೆ. ಅವರು ಯಾವ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದರೋ ಅದರಲ್ಲಿರುವ ಸತ್ಯದೆಡೆಗೆ ನಿನ್ನ ಅನುಮತಿಯೊಂದಿಗೆ ನನ್ನನ್ನು ಮುನ್ನಡೆಸು. ಖಂಡಿತವಾಗಿಯೂ ನೀನಿಚ್ಛಿಸಿದವರನ್ನು ನೀನು ನೇರವಾದ ಮಾರ್ಗದೆಡೆಗೆ ಮುನ್ನಡೆಸುವವನಾಗಿರುವೆ.”
ಇದು ನಮಾಝ್ ಪ್ರಾರಂಭಿಸುವಾಗ -ವಿಶೇಷವಾಗಿ ರಾತ್ರಿ ನಮಾಝ್- ಹೇಳುವ ಪ್ರಾರ್ಥನೆ. ಇದು ಹೃದಯದಲ್ಲಿ ಸಂಶಯ ಉಂಟಾಗುವಾಗ ಹೇಳಬೇಕಾದ ಪ್ರಾರ್ಥನೆ