﴿اللَّهُمَّ مَالِكَ الْمُلْكِ تُؤْتِي الْمُلْكَ مَن تَشَاءُ وَتَنزِعُ الْمُلْكَ مِمَّنْ تَشَاءُ وَتُعِزُّ مَن تَشَاءُ وَتُذِلُّ مَن تَشَاءُ بِيَدِكَ الْخَيْرُ إِنَّكَ عَلَى كُلِّ شَيْءٍ قَدِيرٌ ٢٦ تُولِجُ اللَّيْلَ فِي النَّهَارِ وَتُولِجُ النَّهَارَ فِي اللَّيْلِ وَتُخْرِجُ الْحَيَّ مِنَ الْمَيِّتِ وَتُخْرِجُ الَمَيِّتَ مِنَ الْحَيِّ وَتَرْزُقُ مَن تَشَاءُ بِغَيْرِ حِسَاب﴾
{آيتان من سورة آل عمران آية (٢٦-٢٧)، وفي أول الآية الأولى حُذفت كلمة (قل) عمدًا للإشارة إلى بداية الدعاء.}
"ಹೇಳಿರಿ: ‘ಓ ಆಧಿಪತ್ಯದ ಒಡೆಯನಾಗಿರುವ ಅಲ್ಲಾಹುವೇ! ನೀನಿಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನಿಚ್ಛಿಸುವವರಿಂದ ನೀನು ಆಧಿಪತ್ಯವನ್ನು ತೆಗೆದುಬಿಡುವೆ. ನೀನಿಚ್ಛಿಸುವವರನ್ನು ನೀನು ಗೌರವಿಸುವೆ ಮತ್ತು ನೀನಿಚ್ಛಿಸುವವರನ್ನು ನೀನು ಅವಮಾನ ಮಾಡುವೆ. ಒಳಿತಿರುವುದು ನಿನ್ನ ಕೈಯಲ್ಲಾಗಿದೆ. ಖಂಡಿತವಾಗಿಯೂ ನೀನು ಸಕಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ. ನೀನು ರಾತ್ರಿಯನ್ನು ಹಗಲಿನಲ್ಲಿ ನುಸುಳಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ನುಸುಳಿಸುವೆ. ನಿರ್ಜೀವಿಯಿಂದ ಜೀವವಿರುವುದನ್ನು ಹೊರತರುವೆ ಮತ್ತು ಜೀವವಿರುವುದರಿಂದ ನಿರ್ಜೀವಿಯನ್ನು ಹೊರತರುವೆ. ನೀನಿಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ’." (ಕುರ್‌ಆನ್ 3:27)
ಇವು ಸೂರ ಆಲು ಇಮ್ರಾನ್‌ನ 26-27 ಆಯತ್‌ಗಳು. ಆಯತ್ತನ್ನು ಪ್ರಾರ್ಥನೆಯ ರೂಪಕ್ಕೆ ತರುವುದಕ್ಕಾಗಿ ಆರಂಭದಲ್ಲಿರುವ ಕುಲ್ ಎಂಬ ಪದವನ್ನು ಬಿಡಲಾಗಿದೆ.