8

«اللَّهُمَّ رَبَّنَا لَكَ الحَمْدُ أَنْتَ قَيِّمُ السَّمَوَاتِ وَالأَرْضِ، وَلَكَ الحَمْدُ أَنْتَ رَبُّ السَّمَوَاتِ وَالأَرْضِ وَمَنْ فِيهِنَّ، وَلَكَ الحَمْدُ أَنْتَ نُورُ السَّمَوَاتِ وَالأَرْضِ وَمَنْ فِيهِنَّ، أَنْتَ الحَقُّ، وَقَوْلُكَ الحَقُّ، وَوَعْدُكَ الحَقُّ، وَلِقَاؤُكَ الحَقُّ، وَالجَنَّةُ حَقٌّ، وَالنَّارُ حَقٌّ، (وَالنَّبِيُّونَ حَقٌّ، وَمُحَمَّدٌ صَلَّى اللهُ عَلَيْهِ وَسَلَّمَ حَقٌّ) وَالسَّاعَةُ حَقٌّ، اللَّهُمَّ لَكَ أَسْلَمْتُ، وَبِكَ آمَنْتُ، وَعَلَيْكَ تَوَكَّلْتُ، (وَإِلَيْكَ أَنَبْتُ) وَإِلَيْكَ خَاصَمْتُ، وَبِكَ حَاكَمْتُ، فَاغْفِرْ لِي مَا قَدَّمْتُ وَمَا أَخَّرْتُ، وَأَسْرَرْتُ وَأَعْلَنْتُ، وَمَا أَنْتَ أَعْلَمُ بِهِ مِنِّي، (أَنْتَ المُقَدِّمُ، وَأَنْتَ المُؤَخِّرُ) لاَ إِلَهَ إِلَّا أَنْتَ»

ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದು, ಅನ್ತ ಕಯ್ಯಿಮು ಸ್ಸಮಾವಾತಿ ವಲ್ ಅರ್‍ದಿ, ವಲಕಲ್ ಹಮ್ದು, ಅನ್ತ ರಬ್ಬು ಸ್ಸಮಾವಾತಿ ವಲ್ ಅರ್‍ದಿ, ವಮನ್ ಫೀಹಿನ್ನ, ವಲಕಲ್ ಹಮ್ದು, ಅನ್ತ ನೂರು ಸ್ಸಮಾವಾತಿ ವಲ್ ಅರ್‍ದಿ, ವಮನ್ ಫೀಹಿನ್ನ, ಅನ್ತಲ್ ಹಕ್ಕು, ವಕೌಲುಕಲ್ ಹಕ್ಕು, ವವಅ್‌ದುಕಲ್ ಹಕ್ಕು, ವಲಿಕಾಉಕ ಹಕ್ಕುನ್, ವಲ್ ಜನ್ನತು ಹಕ್ಕುನ್, ವನ್ನಾರು ಹಕ್ಕುನ್, ವನ್ನಬಿಯ್ಯೂನ ಹಕ್ಕುನ್, ವಮುಹಮ್ಮದುನ್ ಸಲ್ಲಲ್ಲಾಹು ಅಲೈಹಿ ವಸಲ್ಲಮ ಹಕ್ಕುನ್, ವಸ್ಸಾಅತು ಹಕ್ಕುನ್, ಅಲ್ಲಾಹುಮ್ಮ ಲಕ ಅಸ್ಲಮ್ತು, ವಬಿಕ ಆಮನ್ತು, ವಅಲೈಕ ತವಕ್ಕಲ್ತು, ವಇಲೈಕ ಅನಬ್ತು, ವಇಲೈಕ ಖಾಸಮ್ತು, ವಬಿಕ ಹಾಕಮ್ತು, ಫಗ್‍ಫಿರ್ ಲೀ ಮಾ ಕದ್ದಮ್ತು ವಮಾ ಅಖ್ಖರ್ತು, ವಅಸ್ರರ್ತು ವಅಅ್‌ಲನ್ತು, ವಮಾ ಅನ್ತ ಅಅಲಮು ಬಿಹೀ ಮಿನ್ನೀ, ಅನ್ತಲ್ ಮುಕದ್ದಿಮು ವಅನ್ತಲ್ ಮುಅಖ್ಖಿರು ಲಾ ಇಲಾಹ ಇಲ್ಲಾ ಅನ್ತ.

ಓ ಅಲ್ಲಾಹ್! ನಿನಗೆ ಸರ್ವಸ್ತುತಿ. ನೀನು ಭೂಮ್ಯಾಕಾಶಗಳ ನಿಯಂತ್ರಕನಾಗಿರುವೆ. ನಿನಗೆ ಸರ್ವಸ್ತುತಿ. ನೀನು ಭೂಮ್ಯಾಕಾಶಗಳ ಮತ್ತು ಅದರಲ್ಲಿರುವವರ ರಬ್ಬ್ ಆಗಿರುವೆ. ನಿನಗೆ ಸರ್ವಸ್ತುತಿ. ನೀನು ಭೂಮ್ಯಾಕಾಶಗಳ ಮತ್ತು ಅದರಲ್ಲಿರುವವರ ಬೆಳಕಾಗಿರುವೆ. ನೀನು ಸತ್ಯ. ನಿನ್ನ ಮಾತು ಸತ್ಯ. ನಿನ್ನ ವಾಗ್ದಾನ ಸತ್ಯ. ನಿನ್ನ ಭೇಟಿ ಸತ್ಯ. ಸ್ವರ್ಗ ಸತ್ಯ. ನರಕ ಸತ್ಯ. ಪ್ರವಾದಿಗಳು ಸತ್ಯ. ಮುಹಮ್ಮದ್(ಸ) ಸತ್ಯ. ಅಂತ್ಯಘಳಿಗೆಯು ಸತ್ಯ. ಓ ಅಲ್ಲಾಹ್! ನಾನು ನಿನಗೆ ಶರಣಾಗಿದ್ದೇನೆ. ನಿನ್ನಲ್ಲಿ ವಿಶ್ವಾಸವನ್ನಿಟ್ಟಿದ್ದೇನೆ. ನಿನ್ನ ಕಡೆಗೆ ಪಶ್ಚಾತ್ತಾಪಪಟ್ಟು ಮರಳಿದ್ದೇನೆ. ನಿನಗಾಗಿ ತರ್ಕಿಸುತ್ತೇನೆ. ನಿನ್ನಲ್ಲಿ ವಿಧಿಯನ್ನು ಹುಡುಕುತ್ತೇನೆ. ಆದುದರಿಂದ ನಾನು ಈಗಾಗಲೇ ಮಾಡಿರುವ ಮತ್ತು ಮುಂದೆ ಮಾಡಲಿರುವ, ಮರೆಮಾಚಿರುವ ಮತ್ತು ಬಹಿರಂಗಪಡಿಸಿರುವ ಮತ್ತು ನನ್ನ ಬಗ್ಗೆ ನಿನಗೆ ತಿಳಿದಿರುವ ಎಲ್ಲಾ ಪಾಪಗಳನ್ನು ಕ್ಷಮಿಸು. ನೀನು ಮುಂದೂಡುವವನು ಮತ್ತು ಹಿಂದೂಡುವವನು. ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ.

8/24