«اللَّهُمَّ إِنِّي أَسْأَلُكَ بِأَنَّ لَكَ الْحَمْدُ، لَا إِلَهَ إِلَّا أَنْتَ الْمَنَّانُ، بَدِيعُ السَّمَوَاتِ وَالْأَرْضِ، يَا ذَا الْجَلَالِ وَالْإِكْرَامِ، يَا حَيُّ يَا قَيُّومُ»
{ورد في الحديث أن هذا الدعاء هو اسم الله الأعظم الذي إذا دُعي به أجاب وإذا سُئل به أعطى}
ಅಲ್ಲಾಹುಮ್ಮ ಇನ್ನೀ ಅಸ್ಅಲುಕ ಬಿಅನ್ನ ಲಕಲ್ ಹಮ್ದು, ಲಾ ಇಲಾಹ ಇಲ್ಲಾ ಅನ್ತ, ಅಲ್‍ಮನ್ನಾನು, ಬದೀಉ ಸ್ಸಮಾವಾತಿ ವಲ್ ಅರ್ದಿ, ಯಾ ದಲ್ ಜಲಾಲಿ ವಲ್ ಇಕ್ರಾಮಿ, ಯಾ ಹಯ್ಯು ಯಾ ಕಯ್ಯೂಮ್.
“ಓ ಅಲ್ಲಾಹ್! ಸರ್ವಸ್ತುತಿಗಳು ನಿನಗೇ ಮೀಸಲು ಎಂಬುದರ ಮೂಲಕ ನಾನು ನಿನ್ನಲ್ಲಿ ಬೇಡುತ್ತೇನೆ. ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ನೀನು ಏಕೈಕನು. ನಿನಗೆ ಯಾವುದೇ ಸಹಭಾಗಿಗಳಿಲ್ಲ. ಅತ್ಯಧಿಕ ಅನುಗ್ರಹಗಳನ್ನು ನೀಡುವವನು. ಪೂರ್ವ ಮಾದರಿಯಿಲ್ಲದೆ ಭೂಮ್ಯಾಕಾಶಗಳನ್ನು ಸೃಷ್ಟಿಸಿದವನೇ! ಸಾರ್ವಭೌಮತ್ವ ಮತ್ತು ಘನತೆಗಳ ಒಡೆಯನೇ! ನಿರಂತರವಾಗಿ ಜೀವಿಸುವವನೇ! ಸ್ವಯಂ ಅಸ್ತಿತ್ವದಲ್ಲಿರುವವನು ಮತ್ತು ಇತರೆಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನೇ!”
ಈ ಪ್ರಾರ್ಥನೆ ಇಸ್ಮುಲ್ ಅಅಝಮ್ ಆಗಿದೆಯೆಂದು ಹದೀಸಿನಲ್ಲಿ ಬಂದಿದೆ. ಇದರ ಮೂಲಕ ಪ್ರಾರ್ಥಿಸಿದರೆ ಉತ್ತರ ಸಿಗುತ್ತದೆ ಮತ್ತು ಬೇಡಿದರೆ ಬೇಡಿಕೆ ಈಡೇರುತ್ತದೆ.