5

ಐದು: ಪ್ರಾರ್ಥಿಸುವವನ ಆಹಾರ ಮತ್ತು ಪಾನೀಯವು ಕಾನೂನುಬಾಹಿರ ಗಳಿಕೆಯದ್ದಾಗಿರಬಾರದು. ಏಕೆಂದರೆ ಇದು ಪ್ರಾರ್ಥನೆಗೆ ಉತ್ತರ ಸಿಗುವುದನ್ನು ತಡೆಯುವ ಅಡೆತಡೆಗಳಲ್ಲಿ ಒಂದಾಗಿದೆ. ಅಬು ಹುರೈರ(ರ) ರವರ ಹದೀಸಿನಲ್ಲಿರುವಂತೆ ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು: ಕೆದರಿದ ಕೂದಲಿನ, ಧೂಳು ಮೆತ್ತಿದ ಬಟ್ಟೆಗಳಿರುವ ಒಬ್ಬ ಪ್ರಯಾಣಿಕ ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ. ತನ್ನ ಎರಡು ಕೈಗಳನ್ನು ಆಕಾಶಕ್ಕೆ ಎತ್ತಿ ಹಿಡಿದು, 'ನನ್ನ ರಬ್ಬೇ ನನ್ನ ರಬ್ಬೇ' ಎಂದು ಆತ ಕೂಗಿ ಕರೆಯುತ್ತಾನೆ. ಆದರೆ ಅವನ ಆಹಾರವು ಹರಾಮ್ ಆಗಿದೆ. ಅವನ ಪಾನೀಯವು ಹರಾಮ್ ಆಗಿದೆ. ಅವನ ಬಟ್ಟೆಬರೆ ಹರಾಮ್ ಆಗಿದೆ. ಆತ ನಿಷಿದ್ಧವಾದ ಪೋಷಕಾಂಶಗಳಿಂದ ಪೋಷಿಸಲ್ಪಟ್ಟಿದ್ದಾನೆ. ಹೀಗಿರುವಾಗ ಅವನಿಗೆ ಹೇಗೆ ಉತ್ತರ ಸಿಗಬಹುದು? (ಮುಸ್ಲಿಂ 1015)

5/16