4

ನಾಲ್ಕು: ನೀವು ನಿಮ್ಮ ಪಾಪಗಳ ಮೂಲಕ ಅಲ್ಲಾಹನಿಂದ ಎಷ್ಟೇ ದೂರ ಸಾಗಿದ್ದರೂ, ನೀವು ಪಶ್ಚಾತ್ತಾಪಪಡುವಾಗ ಮತ್ತು ಅಲ್ಲಾಹನ ಕಡೆಗೆ ತಿರುಗುವಾಗ ಅಲ್ಲಾಹು ಬಹಳ ಸಂತೋಷಪಡುತ್ತಾನೆ. ಆದ್ದರಿಂದ ಪ್ರಾರ್ಥನೆಗೆ ಉತ್ತರ ಸಿಗಲಿಲ್ಲವೆಂಬ ನೋವು ಅಥವಾ ಅಲ್ಲಾಹನ ಕರುಣೆಯ ಕುರಿತಾದ ಹತಾಶೆ ನಿಮ್ಮಲ್ಲಿ ಹರಿದಾಡದಂತೆ ಎಚ್ಚರವಹಿಸಿ. ಬದಲಾಗಿ ತೌಬಾ ಮಾಡುವ ಮೂಲಕ ಮತ್ತು ಅಲ್ಲಾಹನ ಕಡೆಗೆ ತಿರುಗುವ ಮೂಲಕ ಅಲ್ಲಾಹು ಸಂತೋಷಪಡುವುದನ್ನು ನಿಮ್ಮ ಮನಸ್ಸಿನಲ್ಲಿ ಭಾವಿಸಿಕೊಳ್ಳಿ. ಅಲ್ಲಾಹು ನಿರಪೇಕ್ಷನಾಗಿದ್ದಾನೆ. ಅವನು ಹೇಳುವುದು ನೋಡಿ: “ಖಂಡಿತವಾಗಿಯೂ ಅಲ್ಲಾಹು ಎಲ್ಲಾ ಪಾಪಗಳನ್ನೂ ಕ್ಷಮಿಸುತ್ತಾನೆ.” “ನನ್ನ ದಾಸರು ನನ್ನ ಬಗ್ಗೆ ಕೇಳಿದರೆ, ನಾನು ಹತ್ತಿರದಲ್ಲಿದ್ದೇನೆ, ಮತ್ತು ಪ್ರಾರ್ಥಿಸುವವರ ಪ್ರಾರ್ಥನೆಗೆ ನಾನು ಉತ್ತರಿಸುತ್ತೇನೆ ಎಂದು ಹೇಳಿರಿ.”

4/16