12

ಮಂತ್ರಿಸುವಾಗ ಗಮನ ಹರಿಸಬೇಕಾದ ಕೆಲವು ಷರತ್ತುಗಳು ಮತ್ತು ಸೂಚನೆಗಳು:

1- ಮಂತ್ರ ಕುರ್‌ಆನ್ ಮತ್ತು ಸುನ್ನತ್ತಿನಲ್ಲಿ ಬಂದ ಮಂತ್ರವಾಗಿರಬೇಕು, ಮಂತ್ರದ ಶಬ್ದಗಳಲ್ಲಿ ಮತ್ತು ಮಂತ್ರಿಸುವ ರೂಪದಲ್ಲಿ ಅದು ಶಿರ್ಕ್, ಬಿದ್‌ಅತ್ ಮತ್ತು ಹರಾಮ್‌ಗಳಿಂದ ಮುಕ್ತವಾಗಿರಬೇಕು.

2- ಮುಸಲ್ಮಾನನು ಅಲ್ಲಾಹನಲ್ಲಿ ಅವಲಂಬಿತನಾಗಿ ಅವನ ಮೇಲೆ ಭರವಸೆಯಿಡಬೇಕು. ಮಂತ್ರ ಒಂದು ಕಾರಣ ಮಾತ್ರವಾಗಿದ್ದು ಅಲ್ಲಾಹನ ಅನುಮತಿಯಿಲ್ಲದಿದ್ದರೆ ಅದೇನೂ ಪ್ರಭಾವ ಬೀರುವುದಿಲ್ಲವೆಂದು ತಿಳಿದಿರಬೇಕು.

3- ಪರೀಕ್ಷಿಸುವುದಕ್ಕಾಗಿ ಮಂತ್ರಿಸಬಾರದು. ಮಂತ್ರ ಪ್ರಭಾವ ಬೀರುತ್ತದೆ ಎಂಬ ಬಲವಾದ ನಂಬಿಕೆಯಿಂದ ಮಂತ್ರಿಸಬೇಕು. ಮಂತ್ರಿಸುವವನು ಮತ್ತು ಮಂತ್ರಿಸಲ್ಪಡುವವನು ಇಬ್ಬರೂ ಮಂತ್ರದ ಪ್ರಭಾವದಲ್ಲಿ ಮತ್ತು ಅದು ಗುಣಪಡಿಸುತ್ತದೆ ಎಂಬ ವಿಷಯದಲ್ಲಿ ನಂಬಿಕೆ ಹೊಂದಿರಬೇಕು.

4- ಪವಿತ್ರ ಕುರ್‌ಆನಿನ ಎಲ್ಲ ಆಯತ್‌ಗಳೂ ಗುಣಪಡಿಸುವ ಆಯತ್‌ಗಳಾಗಿವೆ. ಅಲ್ಲಾಹು ಹೇಳುತ್ತಾನೆ – ಸತ್ಯವಿಶ್ವಾಸಿಗಳಿಗೆ ಉಪಶಮನ ಮತ್ತು ಕರುಣೆಯಾಗಿರುವುದನ್ನು ನಾನು ಕುರ್‌ಆನಿನಿಂದ ಅವತೀರ್ಣಗೊಳಿಸುತ್ತೇವೆ. ಆದರೆ ಮಂತ್ರಿಸಬೇಕೆಂದು ವರದಿಯಾಗಿರುವ ಆಯತ್‌ಗಳ ಮೂಲಕ ಮಂತ್ರಿಸುವುದು ಹೆಚ್ಚು ಯೋಗ್ಯವಾಗಿದೆ.

5- ರೋಗಿ ತನಗೆ ತಾನೇ ಮಂತ್ರಿಸುವುದು ಶ್ರೇಷ್ಠವಾಗಿದೆ. ಏಕೆಂದರೆ ಇದು ಅವನಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ತನ್ನ ಅಸಹಾಯಕತೆಯನ್ನು ಮತ್ತು ಅಗತ್ಯವನ್ನು ಅಲ್ಲಾಹನ ಮುಂದೆ ತೋಡಿಕೊಳ್ಳುವುದರಲ್ಲಿ ಅವನು ಹೆಚ್ಚು ಪ್ರಾಮಾಣಿಕನಾಗಿರುತ್ತಾನೆ. ಏಕೆಂದರೆ ಹೃದಯ ಸಾನಿಧ್ಯ ಮತ್ತು ಉದ್ದೇಶದ ನಿಷ್ಕಳಂಕತೆ ಮಂತ್ರದಲ್ಲಿ ಪರಿಣಾಮಕಾರಿಯಾಗಿದೆ.

12/12