(اللَّهُمَّ أَنْتَ رَبِّي لَا إِلَهَ إِلَّا أَنْتَ خَلَقْتَنِي، وَأَنَا عَبْدُكَ، وَأَنَا عَلَى عَهْدِكَ وَوَعْدِكَ مَا اسْتَطَعْتُ، أَعُوذُ بِكَ مِنْ شَرِّ مَا صَنَعْتُ، أَبُوءُ لَكَ بِنِعْمَتِكَ عَلَيَّ، وَأَبُوءُ لَكَ بِذَنْبِي فَاغْفِرْ لِي فَإِنَّهُ لَا يَغْفِرُ الذُّنُوبَ إِلَّا أَنْتَ)
ಅಲ್ಲಾಹುಮ್ಮ ಅನ್ತ ರಬ್ಬೀ ಲಾ ಇಲಾಹ ಇಲ್ಲಾ ಅನ್ತ ಖಲಕ್ತನೀ ವಅನ ಅಬ್ದುಕ, ವಅನ ಅಲಾ ಅಹ್ದಿಕ ವವಅ್‌ದಿಕ ಮಸ್ತತಅ್‌ತು, ಅಊದು ಬಿಕ ಮಿನ್ ಶರ್ರಿ ಮಾ ಸನಅ್‌ತು, ಅಬೂಉ ಲಕ ಬಿನಿಅ್‌ಮತಿಕ ಅಲಯ್ಯ, ವಅಬೂಉ ಬಿದಮ್ಬೀ ಫಗ್‍ಫಿರ್ ಲೀ ಇನ್ನಹೂ ಲಾ ಯಗ್‍ಫಿರು ದ್ದುನೂಬ ಇಲ್ಲಾ ಅನ್ತ್
ಓ ಅಲ್ಲಾಹ್! ನೀನು ನನ್ನ ರಬ್ಬ್. ನಿನ್ನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ನೀನು ನನ್ನನ್ನು ಸೃಷ್ಟಿಸಿರುವೆ. ನಾನು ನಿನ್ನ ದಾಸ. ನನಗೆ ಸಾಧ್ಯವಾಗುವ ಮಟ್ಟಿಗೆ ನಾನು ನಿನ್ನ ಕರಾರು ಮತ್ತು ವಾಗ್ದಾನವನ್ನು ಪಾಲಿಸುತ್ತಿದ್ದೇನೆ. ನಾನು ಮಾಡಿದ ಕರ್ಮಗಳ ಕೆಡುಕಿನಿಂದ ನಿನ್ನಲ್ಲಿ ರಕ್ಷೆ ಬೇಡುತ್ತೇನೆ. ನೀನು ನನಗೆ ಅನುಗ್ರಹಿಸಿದ ಅನುಗ್ರಹಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಪಾಪವನ್ನೂ ನಾನು ಒಪ್ಪಿಕೊಳ್ಳುತ್ತೇನೆ. ಆದುದರಿಂದ ನನ್ನನ್ನು ಕ್ಷಮಿಸು. ಖಂಡಿತವಾಗಿಯೂ ನೀನಲ್ಲದೆ ಪಾಪಗಳನ್ನು ಕ್ಷಮಿಸುವವರಿಲ್ಲ.