8
ಮೆತ್ತಗಿನ ಸ್ವರದಲ್ಲಿ ಪ್ರಾರ್ಥಿಸುವುದು. ಉಚ್ಛ ಸ್ವರದಲ್ಲಿ ಪ್ರಾರ್ಥಿಸಬಾರದು. ಅಲ್ಲಾಹು ಹೇಳುತ್ತಾನೆ: “ನೀವು ನಿಮ್ಮ ರಬ್ಬಿನೊಂದಿಗೆ ವಿನಮ್ರವಾಗಿ ಮತ್ತು ಮೆತ್ತಗಿನ ಸ್ವರದಲ್ಲಿ ಪ್ರಾರ್ಥಿಸಿರಿ.” [ಅಲ್-ಅಅರಾಫ್: 55]. ಮೆತ್ತಗಿನ ಸ್ವರದಲ್ಲಿ ಪ್ರಾರ್ಥಿಸುವುದು ಪ್ರಾಮಾಣಿಕತೆಗೆ ಹೆಚ್ಚು ಹತ್ತಿರವಾಗಿದೆ. ಅಲ್ಲಾಹು ಝಕರಿಯ್ಯ(ಅ) ರವರ ಪ್ರಾರ್ಥನೆಯನ್ನು ಈ ಕಾರಣದಿಂದಲೇ ಹೊಗಳಿದ್ದಾನೆ. ಅಲ್ಲಾಹು ಹೇಳುತ್ತಾನೆ: “ಅವರು (ಝಕರಿಯ್ಯ) ಮೆತ್ತಗಿನ ಸ್ವರದಲ್ಲಿ ಪ್ರಾರ್ಥಿಸಿದಾಗ..” [ಮರ್ಯಮ್ 3]