7
ಪ್ರಾರ್ಥನೆಯ ವಚನಗಳನ್ನು ಪುನರಾವರ್ತಿಸುವುದು ಮತ್ತು ಪ್ರಾರ್ಥನೆ ಸ್ವೀಕರಿಸುವಂತೆ ಅಲ್ಲಾಹನನ್ನು ಒತ್ತಾಯಿಸುವುದು. ಇಬ್ನ್ ಅಬ್ಬಾಸ್(ರ) ರಿಂದ ವರದಿ. ಬದ್ರ್ ಯುದ್ಧದ ಸಂದರ್ಭ ಪ್ರವಾದಿ(ಸ) ರವರು ತಮ್ಮ ಸಹಾಬಾಗಳಿಗೆ ಪ್ರಾರ್ಥಿಸುತ್ತಿದ್ದರು. ಅವರ ಪ್ರಾರ್ಥನೆ ಹೀಗಿತ್ತು: “ಓ ಅಲ್ಲಾಹನೇ. ನೀನು ನನಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸು. ಓ ಅಲ್ಲಾಹನೇ. ನೀನು ನನಗೆ ವಾಗ್ದಾನ ಮಾಡಿದ್ದನ್ನು ಕೊಡು. ಪ್ರವಾದಿ(ಸ) ರವರು ಹೀಗೆ ಪ್ರಾರ್ಥಿಸುತ್ತಲೇ ಇದ್ದರು. ಎಲ್ಲಿಯವರೆಗೆಂದರೆ ಅವರ ಶಾಲು ಹೆಗಲಿನಿಂದ ಕೆಳಗೆ ಬೀಳುವ ತನಕ. ಅವರ ಬಳಿಯಿದ್ದ ಅಬೂಬಕರ್(ರ) ಹೇಳುತ್ತಿದ್ದರು: ಓ ಅಲ್ಲಾಹನ ಪ್ರವಾದಿಯವರೇ! ತಾವು ಪ್ರಾರ್ಥಿಸಿದ್ದು ಸಾಕು. (ಮುಸ್ಲಿಂ ಸಂಖ್ಯೆ 1763)