6
ಅಲ್ಲಾಹನನ್ನು ಅವನ ಅತ್ಯುತ್ತಮ ಹೆಸರುಗಳ ಮೂಲಕ ಕರೆದು ಪ್ರಾರ್ಥಿಸುವುದು ಮತ್ತು ಸಂದರ್ಭಕ್ಕೆ ತಕ್ಕಂತೆ ಅವನ ಹೆಸರುಗಳನ್ನು ಬಳಸುವುದು. ಉದಾಹರಣೆಗೆ, ರಿಝ್ಕ್ಗಾಗಿ ಪ್ರಾರ್ಥಿಸುವಾಗ ಯಾ ರಝ್ಝಾಕ್ ಎಂದು ಕರೆಯುವುದು. ಕರುಣೆಗಾಗಿ ಪ್ರಾರ್ಥಿಸುವಾಗ ಯಾ ರಹ್ಮಾನ್ ಯಾ ರಹೀಮ್ ಎಂದು ಕರೆಯುವುದು. ಇಝ್ಝತ್ಗಾಗಿ ಪ್ರಾರ್ಥಿಸುವಾಗ ಯಾ ಅಝೀಝ್ ಎಂದು ಕರೆಯುವುದು. ಕ್ಷಮೆಗಾಗಿ ಪ್ರಾರ್ಥಿಸುವಾಗ ಯಾ ಗಫೂರ್ ಎಂದು ಕರೆಯುವುದು. ಗುಣಪಡಿಸುವುದಕ್ಕಾಗಿ ಪ್ರಾರ್ಥಿಸುವಾಗ ಯಾ ಶಾಫೀ ಎಂದು ಕರೆಯುವುದು. ಅಲ್ಲಾಹು ಹೇಳುತ್ತಾನೆ. “ಅತ್ಯುತ್ತಮ ಹೆಸರುಗಳಿರುವುದು ಅಲ್ಲಾಹನಿಗೆ ಮಾತ್ರ. ಆದ್ದರಿಂದ ಆ ಹೆಸರುಗಳ ಮೂಲಕ ಅವನನ್ನು ಕರೆದು ಪ್ರಾರ್ಥಿಸಿರಿ.” [ಅಲ್-ಅಅರಾಫ್: 180].