5

ಅಲ್ಲಾಹನಲ್ಲಿ ಸದ್ಭಾವನೆಯನ್ನಿಟ್ಟು ಅವನು ಪ್ರಾರ್ಥನೆಗೆ ಉತ್ತರ ನೀಡುತ್ತಾನೆಂಬ ದೃಢ ವಿಶ್ವಾಸದಿಂದ ಪ್ರಾರ್ಥಿಸುವುದು. ಉತ್ತರ ಸಿಗಲು ಆತುರಪಡಬಾರದು. ಅಲ್ಲಾಹು ಖಂಡಿತ ಉತ್ತರ ನೀಡುತ್ತಾನೆಂಬ ದೃಢವಿಶ್ವಾಸವಿರಬೇಕು. ಅಬೂ ಹುರೈರ(ರ) ರಿಂದ ವರದಿ. ಪ್ರವಾದಿ(ಸ) ಹೇಳಿದರು: ದಾಸನು ಪಾಪವನ್ನು ಮಾಡಲು ಅಥವಾ ಕುಟುಂಬ ಸಂಬಂಧವನ್ನು ಮುರಿಯಲು ಎಲ್ಲಿಯ ತನಕ ಪ್ರಾರ್ಥಿಸುವುದಿಲ್ಲವೋ ಮತ್ತು ಎಲ್ಲಿಯ ತನಕ ಆತುರಪಡುವುದಿಲ್ಲವೋ ಅಲ್ಲಿಯ ತನಕ ಅಲ್ಲಾಹು ಅವನ ಪ್ರಾರ್ಥನೆಗೆ ಖಂಡಿತ ಉತ್ತರ ನೀಡುತ್ತಾನೆ. ಸಹಾಬಿಗಳು ಕೇಳಿದರು: ಓ ಅಲ್ಲಾಹನ ಸಂದೇಶವಾಹಕರೇ, ಆತುರಪಡುವುದು ಎಂದರೇನು? ಅವರು ಹೇಳಿದರು: "ನಾನು ಪ್ರಾರ್ಥಿಸಿದೆ, ಪ್ರಾರ್ಥಿಸಿದೆ. ಆದರೆ ನನಗೆ ಉತ್ತರ ಸಿಗಲಿಲ್ಲ ಎಂಬ ಹೇಳುತ್ತಾ ಸುಸ್ತಾಗಿ ಪ್ರಾರ್ಥಿಸುವುದನ್ನು ಬಿಟ್ಟುಬಿಡುವುದು." ಮುಸ್ಲಿಂ (35).

5/10