ಅಲ್ಲಾಹನನ್ನು ಸ್ತುತಿಸುವ ಮೂಲಕ ಮತ್ತು ಪ್ರವಾದಿ(ಸ) ರವರ ಮೇಲೆ ಸಲಾತ್ ಹೇಳುವ ಮೂಲಕ ಆರಂಭಿಸುವುದು. ಫದಾಲ ಬಿನ್ ಉಬೈದ್(ರ) ರವರ ಹದೀಸಿನಲ್ಲಿ ಇದನ್ನು ಸೂಚಿಸಲಾಗಿದೆ. ಅವರು ಹೇಳುತ್ತಾರೆ: ಒಬ್ಬ ವ್ಯಕ್ತಿ ಅಲ್ಲಾಹನನ್ನು ಸ್ತುತಿಸದೆ ಮತ್ತು ಪ್ರವಾದಿಯ(ಸ) ಮೇಲೆ ಸಲಾತ್ ಹೇಳದೆ ಪ್ರಾರ್ಥಿಸುವುದನ್ನು ಅಲ್ಲಾಹನ ಸಂದೇಶವಾಹಕರು(ಸ) ಕೇಳಿದರು. ಆಗ ಪ್ರವಾದಿ(ಸ) ಹೇಳಿದರು: ಈತ ಆತುರಪಟ್ಟಿದ್ದಾನೆ. ನಂತರ ಅವನನ್ನು ಕರೆದು ಹೇಳಿದರು: ನಿಮ್ಮಲ್ಲಿ ಒಬ್ಬರು ಪ್ರಾರ್ಥಿಸುವಾಗ ಅಲ್ಲಾಹನನ್ನು ಸ್ತುತಿಸುವ ಮೂಲಕ ಪ್ರಾರಂಭಿಸಲಿ. ನಂತರ ಪ್ರವಾದಿ(ಸ) ರವರ ಮೇಲೆ ಸಲಾತ್ ಹೇಳಲಿ. ನಂತರ ತಾನು ಬಯಸಿದ್ದನ್ನು ಪ್ರಾರ್ಥಿಸಲಿ. [ಇದನ್ನು ಅಬೂದಾವೂದ್ (1481), ಅತ್ತಿರ್ಮಿದಿ (3477) ವರದಿ ಮಾಡಿದ್ದಾರೆ. ಇದನ್ನು ಅಲ್ಅಲ್ಬಾನಿ ತಹ್ಕೀಕು ಸ್ಸಲಾತಿ ಅಲನ್ನಬಿಯ್ಯಿ(ಸ) (86) ದಲ್ಲಿ ಸಹೀಹ್ ಎಂದಿದ್ದಾರೆ]
ಕುರ್ಆನಿನ ಸೂರಗಳ ಆರಂಭದಲ್ಲಿ ವರದಿಯಾಗಿರುವ ಅಲ್ಲಾಹನ ಸ್ತುತಿಗಳ ಮೂಲಕ ಅಲ್ಲಾಹನನ್ನು ಸ್ತುತಿಸಿ, ನಂತರ ಪ್ರವಾದಿ(ಸ) ರವರ ಮೇಲೆ ಸಲಾತ್ ಹೇಳಿ, ನಂತರ ಈ ಕೃತಿಯಲ್ಲಿರುವಂತೆ ನಾನಾ ಸ್ತುತಿಗಳ ಮೂಲಕ ಅಲ್ಲಾಹನನ್ನು ಸ್ತುತಿಸಿದರೆ ಪ್ರಾರ್ಥನೆಗೆ ಉತ್ತರ ಸಿಗುವುದು ನಿಶ್ಚಿತ.