1
ವುದೂ ಇರುವ ಸ್ಥಿತಿಯಲ್ಲಿ ಪ್ರಾರ್ಥಿಸುವುದು. ನಮಾಝ್ಗಾಗಿ ವುದೂ ಮಾಡುವಂತೆ ವುದೂ ಮಾಡುವುದು.
ಅಲ್-ಬುಖಾರಿ ಮತ್ತು ಮುಸ್ಲಿಮ್ನಲ್ಲಿರುವ ಅಬೂ ಮೂಸಾ(ರ) ರವರ ಹದೀಸ್ ನಲ್ಲಿರುವಂತೆ. ಅದರಲ್ಲಿ ಅವರ ಚಿಕ್ಕಪ್ಪ ಅಬೂ ಅಮಿರ್(ರ) ರ ಒಂದು ಘಟನೆಯ ಉಲ್ಲೇಖವಿದೆ. ಪ್ರವಾದಿ(ಸ) ರವರ ಬಳಿಗೆ ಹೋಗಿ ತಮಗಾಗಿ ಪ್ರಾರ್ಥಿಸಲು ಹೇಳಬೇಕೆಂದು ಅಬೂ ಆಮಿರ್(ರ) ಅಬೂ ಮೂಸಾ(ರ) ರನ್ನು ಪ್ರವಾದಿಯ(ಸ) ಬಳಿಗೆ ಕಳಿಸಿದರು. ಆಗ ಪ್ರವಾದಿ(ಸ) ರವರು ನೀರು ತರಲು ಆಜ್ಞಾಪಿಸಿದರು. ನಂತರ ಅದರಲ್ಲಿ ವುದೂ ನಿರ್ವಹಿಸಿದರು. ನಂತರ ಕೈಗಳನ್ನು ಮೇಲಕ್ಕೆತ್ತಿ ಪ್ರಾರ್ಥಿಸಿದರು: "ಓ ಅಲ್ಲಾಹನೇ. ಅಬೂ ಆಮಿರ್ ಉಬೈದ್ರನ್ನು ಕ್ಷಮಿಸು." ಅವರು ಎಷ್ಟರಮಟ್ಟಿಗೆ ಕೈಗಳನ್ನೆತ್ತಿದರು ಎಂದರೆ ಅವರ ಕಂಕುಳದ ಬಿಳುಪು ನನಗೆ ಕಾಣುತ್ತಿತ್ತು. ನಂತರ ಅವರು ಪ್ರಾರ್ಥಿಸಿದರು: "ಓ ಅಲ್ಲಾಹನೇ, ಪುನರುತ್ಥಾನದ ದಿನ ಅವರನ್ನು ನಿನ್ನ ಅನೇಕ ಸೃಷ್ಟಿಗಳಿಗಿಂತ ಹೆಚ್ಚಿನ ಪದವಿಯನ್ನು ನೀಡು." ಅಲ್-ಬುಖಾರಿ (4323) ಮುಸ್ಲಿಂ (2498).