ಸರ್ವಸ್ತುತಿ ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು. ಅವನ ಸಲಾತ್ ಮತ್ತು ಸಲಾಮ್ ಪ್ರವಾದಿಯವರ(ಸ) ಮೇಲೆ, ಅವರ ಕುಟುಂಬದ ಮೇಲೆ ಮತ್ತು ಅವರ ಎಲ್ಲಾ ಸಹಚರರ ಮೇಲಿರಲಿ.
ಇದೊಂದು ಚಿಕ್ಕ ಪುಸ್ತಕವಾಗಿದ್ದು, ಇದರಲ್ಲಿ ಹಲವಾರು ರೀತಿಯ ಪ್ರಾರ್ಥನೆಗಳ ಸಂಗ್ರಹಗಳಿವೆ. (ಅಲ್ಲಾಹನ ಸ್ತುತಿ, ಕುರ್‌ಆನ್‌ನಲ್ಲಿರುವ ಪ್ರಾರ್ಥನೆಗಳು, ಪ್ರವಾದಿ(ಸ) ಯವರ ಪ್ರಾರ್ಥನೆಗಳು, ಪ್ರವಾದಿ(ಸ) ಯವರ ಅಭಯಯಾಚನೆಗಳು, ಧಾರ್ಮಿಕ ಮಂತ್ರಗಳು ಮತ್ತು ಬೆಳಿಗ್ಗೆ ಮತ್ತು ಸಂಜೆ ಹೇಳುವ ದಿಕ್ರ್‌ಗಳು ಇತ್ಯಾದಿ). ಅದೇ ರೀತಿ ಪ್ರಾರ್ಥನೆಯ ಶಿಷ್ಟಾಚಾರಗಳನ್ನೂ ಇದು ಒಳಗೊಂಡಿದೆ. ಮುಸ್ಲಿಮರು ಸಾಕಷ್ಟು ಒಳಿತುಗಳನ್ನು ಸಂಗ್ರಹಿಸುವುದಕ್ಕಾಗಿ, ಕುರ್‌ಆನ್ ಮತ್ತು ಸುನ್ನತ್‌ನಲ್ಲಿರುವ ಅಧಿಕೃತ ಪ್ರಾರ್ಥನೆಗಳನ್ನು ಮಾತ್ರ ಆಯ್ಕೆ ಮಾಡಲು ನಾನು ಅತೀವ ಆಸಕ್ತಿ ವಹಿಸಿದ್ದೇನೆ. ಪ್ರತಿಯೊಂದು ಪ್ರಾರ್ಥನೆಯನ್ನು ಅರೇಬಿಕ್‌ನಲ್ಲಿ ಬರೆದು ನಂತರ ಕನ್ನಡ ಭಾಷೆಗೆ ಅದನ್ನು ಅನುವಾದ ಮಾಡಲಾಗಿದೆ. ಅದರ ಅರೇಬಿಕ್ ಉಚ್ಚಾರಣೆಯನ್ನು ಸಹ ನೀಡಲಾಗಿದೆ. ಪುಸ್ತಕದ ಕೊನೆಯಲ್ಲಿ ಪ್ರಾರ್ಥನೆಗಳು ವರದಿಯಾದ ಹದೀಸ್‌ನ ತಖ್ರೀಜನ್ನು ಉಲ್ಲೇಖಿಸಲಾಗಿದೆ. ಇದನ್ನು ಅಲ್ಲಾಹನ ಮುಖವನ್ನು ಮಾತ್ರ ಬಯಸಿ ಬರೆಯಲಾದ ಒಂದು ಪುಸ್ತಕವನ್ನಾಗಿ ಮಾಡಲು ನಾನು ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುತ್ತೇನೆ. ಅಲ್ಲಾಹನ ಸಲಾತ್ ಮತ್ತು ಸಲಾಮ್ ನಮ್ಮ ಪ್ರವಾದಿವರ್ಯರಾದ ಮುಹಮ್ಮದ್(ಸ) ರ ಮೇಲೆ, ಅವರ ಕುಟುಂಬ ಮತ್ತು ಸಹಚರರಿಗೆ ಮೇಲೆ ಇರಲಿ.
ಡಾ ಅಬ್ದುಲ್ಲಾ ಬಿನ್ ಹಮೂದ್ ಅಲ್-ಫರೀಹ್